ನವದೆಹಲಿ: ಈ ವರ್ಷದ ಕೊನೆಯ ಭಾಗಶಃ ಸೂರ್ಯ ಗ್ರಹಣ ಅಕ್ಟೋಬರ್ 25ರಂದು ಗೋಚರವಾಗಲಿದ್ದು, ಕಾಕತಾಳೀಯ ಎಂಬಂತೆ ದೀಪಾವಳಿ ದಿನದಂದು ಸೂರ್ಯಗ್ರಹಣ ನಡೆಯಲಿದೆ.
ಈ ಬಾರಿಯ ಭಾಗಶಃ ಸೂರ್ಯಗ್ರಹಣವು ಯುರೋಪ್, ಪಶ್ಚಿಮ ಸೈಬಿರಿಯಾ, ಮಧ್ಯ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿಯೂ ಗೋಚರಿಸಲಿದೆ..!!?
ಭಾರತದಲ್ಲಿಯೂ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ ಎಂದು ಟೈಮ್ ಆ್ಯಂಡ್ ಡೇಟ್ ಡಾಟ್ ಕಾಮ್ ತಿಳಿಸಿದೆ.
ನವದೆಹಲಿಯಲ್ಲಿ ಮಧ್ಯಾಹ್ನ 2.28 ನಿಮಿಷಕ್ಕೆ ಮೊದಲು ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಹಂತ, ಹಂತವಾಗಿ ಗ್ರಹಣ ಮುಂದುವರಿದು ಸಂಜೆ 6.20ಕ್ಕೆ ಅಂತ್ಯವಾಗಲಿದೆ.
ಉಡುಪಿಯಲ್ಲಿಯೂ ಭಾಗಶಃ ಸೂರ್ಯಗ್ರಹಣ ಸಂಜೆ 5ಗಂಟೆ 8 ನಿಮಿಷಕ್ಕೆ ಗೋಚರವಾಗತೊಡಗಿ, 5.50ಕ್ಕೆ ಗರಿಷ್ಠ ಪ್ರಮಾಣದಲ್ಲಿ ಗೋಚರಿಸಿ, 6ಗಂಟೆ 6 ನಿಮಿಷಕ್ಕೆ ಗ್ರಹಣ ಕೊನೆಗೊಳ್ಳಲಿದೆ ಎಂದು ತಿಳಿಸಿದೆ.


























