ಪುತ್ತೂರು: ಅಟಲ್ ಉದ್ಯಾನ ಕೊಂಬೆಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ಶನಿವಾರ ಸಂಜೆ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದ ವಾರ್ಷಿಕೋತ್ಸವವನ್ನು ಅ.8 ರಂದು ಸಂಜೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಆಶಾ ಬೆಳ್ಳಾರೆಯವರು ಮಾತನಾಡಿ, ರಾಷ್ಟ್ರೀಯತೆಯನ್ನು ಬೆಳೆಸುವಲ್ಲಿ ಭಜನೆ ಹಾಗೂ ಧಾರ್ಮಿಕ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ವತ್ಸಲಾ ರಾಜ್ಞಿ ವಂದಿಸಿದರು. ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಆಶಾ ಬೆಳ್ಳಾರೆ ಹಾಗೂ ಭಜನಾ ತಂಡದ ಸದಸ್ಯರನ್ನು ವಾರ್ಡ್ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾ ಜೆ ರಾವ್, ಸ್ಮಿತಾ ಬಾಳಿಗ, ಗಣೇಶ್ ಬಾಳಿಗ, ಪ್ರಭಾವತಿ, ವತ್ಸಲಾ ರಾಜ್ಞಿ, ವೀಣಾ ಪೂಜಾರಿ, ಪ್ರೇಮ, ಶೋಭಾ, ಸುನೀತಾ, ರಾಧಾ,ಮತ್ತು ಪುಟಾಣಿ ಮಕ್ಕಳು ಹಾಗೂ ಪೋಷಕರು, ಮೊದಲಾದವರು ಪಾಲ್ಗೊಂಡಿದ್ದರು.


























