ಸುಳ್ಯ: ಸರಕಾರಿ ಆಸ್ಪತ್ರೆಯ ಎದುರುಗಡೆ ನಿಲ್ಲಿಸಲಾದ ಕಾರಿನಲ್ಲಿ ಮೃತದೇಹವೊಂದು ರವಿವಾರ ಪತ್ತೆಯಾಗಿದೆ.

ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡ ರವರ ಪುತ್ರ ಗೌರೀಶ (30) ಮೃತ ವ್ಯಕ್ತಿ.
ಗೌರೀಶ ನಾಲ್ಕು ದಿನಗಳ ಹಿಂದೆ ಕಾರನ್ನು ಆಸ್ಪತ್ರೆ ಎದುರಿನ ಜಾಗದಲ್ಲಿ ನಿಲ್ಲಿಸಿದ್ದು, ಎರಡು ದಿನಗಳ ಹಿಂದೆಯೇ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಶವ ಊದಿಕೊಂಡಿದ್ದು, ವಾಸನೆ ಬರತೊಡಗಿದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ಸ್ಥಳೀಯರಿಗೆ ಘಟನೆ ಬೆಳಕಿಗೆ ಬಂದಿದೆ.
ಡಿವೈಎಸ್ಪಿ ಡಾ. ಹಿರೇಮಠ, ಸುಳ್ಯ ಎಸ್ಐ ದಿಲೀಪ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



























