ಬಂಟ್ವಾಳ: ಪಾದಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಟ್ರಾಫಿಕ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತಮಿಳುನಾಡು ಮೂಲದ ಪೆರಂಬದೂರು ಜಿಲ್ಲೆಯ ವೇಪನ್ ತಾಲೂಕಿನ ಪೆರಿಯಾ ವಡಗರೈ ನಿವಾಸಿ ಸೆಲ್ವರಾಜ್ (44) ಎಂಬಾತನ ನ್ನು ಆಂಧ್ರಪ್ರದೇಶದದ ಕಡಪ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸೇಲ್ವರಾಜ್ 2017 ರಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಬಿಸಿರೋಡು ಕೈಕಂಬದ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಸೆಲ್ವರಾಜ್ ಚಲಾಯಿಸುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದ.
ಆರೋಪಿಯನ್ನು ಟ್ರಾಫಿಕ್ ಎಸ್ಐ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ದೇವದಾಸ್ ಹಾಗೂ ರಾಜು ಅವರು ಅಂಧ್ರ ಪ್ರದೇಶದಿಂದ ಬಂಧಿಸಿ ಕರೆ ತಂದಿದ್ದಾರೆ.



























