ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸಿಕ್ಕ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತದೇಹವನ್ನು ವಾರಸುದಾರರಿಗೆ ಬಂಟ್ವಾಳ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಮಂಗಳೂರು ಕದ್ರಿ ರುದ್ರಭೂಮಿ ರಸ್ತೆ ನಿವಾಸಿ ಶ್ರೀರಂಗ ಐತಾಳ್ ರವರ ಪತ್ನಿ ಸುಮತಿ (52) ಮೃತ ಮಹಿಳೆ.
ಇವರು ಕಳೆದ ಎಂಟು ದಿನಗಳ ಹಿಂದೆ ಮಧ್ಯಾಹ್ನ ಮನೆಯಿಂದ ಯಾರಿಗೂ ಹೇಳದೆ, ಮೊಬೈಲ್ ಮನೆಯಲ್ಲಿಟ್ಟು ಹೋದವರು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಇ.ಝಡ್ ಪ್ಲಾಂಟ್ ಸಮೀಪದ ನೇತ್ರಾವತಿ ನದಿಯಲ್ಲಿ ಆ.9 ರಂದು ಆದಿತ್ಯವಾರ ಬೆಳಿಗ್ಗೆ ತೇಲಾಡುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿದ ಪೊಲೀಸರು ಅಪರಿಚಿತ ಮೃತದೇಹದ ಗುರುತು ಪತ್ತೆಗಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು.
ಪೊಲೀಸ್ ಮಾಹಿತಿ ಆಧರಿಸಿ ಇಂದು ಬಂಟ್ವಾಳ ಪೊಲೀಸರ ಮುಖಾಂತರ ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.

























