ಮಂಗಳೂರು: ಎನ್‌ಎಂಪಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮಹಿಳಾ ಪಿಎಸ್‌ಐ ನವಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ಗೇಟ್ ಬಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಮಹಿಳಾ ಪಿಎಸ್‌ಐ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಜ್ಯೋತಿ ಭಾಯಿ ಸಿಂಗ್ ಪರ್ಮರ್ (33) ನವಮಂಗಳೂರು ಬಂದರು ಪ್ರಾಧಿಕಾರದ ಗೇಟ್‌ನಲ್ಲಿ ಕರ್ತವ್ಯ ನಿರತರಾಗಿದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಜ್ಯೋತಿ ಭಾಯಿ ಸಿಂಗ್ ಪರ್ಮರ್ ರವರ ಗಂಡ ಓಂಬೀರ್ ಸಿಂಗ್ ಎಂ ಆರ್ ಪಿಎಲ್ ನಲ್ಲಿ ಸಹಾಯಕ ಕಮಾಂಡೆಂಟ್ ಆಗಿದ್ದು, ಗಂಡ – ಹೆಂಡತಿ ಇಬ್ಬರೂ ರಾಜಸ್ಥಾನ ಭರತ್ ಪುರ್ ನವರು ಎನ್ನಲಾಗಿದೆ. ಜ್ಯೋತಿ ಭಾಯಿ 2010ನೇ ಬ್ಯಾಚ್ ನವರಾಗಿದ್ದಾರೆ.


























