ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಇದರ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದ ಹಾಜಿ ಉಸ್ಮಾನ್ ಪೈಝಿತೋಡಾರ್ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ನಿಯೋಗದ ವತಿಯಿಂದ ಸನ್ಮಾನ ಮಾಡಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ರಿಯಾಝ್ ಪರ್ಲಡ್ಕ, ಅಲ್ಪಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ರಶೀದ್ಅಮ್ಚಿನಡ್ಕ, ಅಸಂಘಟಿತ ಕಾರ್ಮಿಕ ಘಟಕ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶರೀಪ್ ಬಲ್ನಾಡ್, ವಿಟ್ಲ ಉಪ್ಪಿನಂಗಡಿ ಯಂಗ್ ಬ್ರಿಗ್ರೇಡ್ ಉಪಾಧ್ಯಕ್ಷರಾದ ಉನೈಸ್, ಗಡಿಯಾರ ಯಂಗ್ ಬ್ರಿಗ್ರೇಡ್ ಮುಖಂಡರಾದ ಸಿನಾನ್ ಪರ್ಲಡ್ಕ, ಬಾತೀಷ್ ಬಲ್ನಾಡ್, ಕಾಂಗ್ರೆಸ್ ಮುಖಂಡರಾದ ಝುಬೈರ್ ಬಪ್ಪಳಿಗೆ ಉಪಸ್ಥಿತರಿದ್ದರು.























