ಪುತ್ತೂರು: ಸರಕಾರಿ ಬಸ್ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಹೆಸರು ಇಡಲು ಸರಕಾರ ಅನುಮೋದನೆ ನೀಡಿದ್ದು, ಈ ಹಿನ್ನೆಲೆ ಯುವ ವಾಹಿನಿ ರಿ. ಪುತ್ತೂರು ಘಟಕದ ವತಿಯಿಂದ ಶಾಸಕ ಸಂಜೀವ ಮಠಂದೂರು ರವರನ್ನು ಗೌರವಿಸಲಾಯಿತು.

ಪುತ್ತೂರು ಸರಕಾರಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವ ಬಗ್ಗೆ ಶಾಸಕ ಸಂಜೀವ ಮಠಂದೂರು ರವರು ವಿಶೇಷ ಮುತುವರ್ಜಿ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದರು.
ಈ ಸಂದರ್ಭದಲ್ಲಿ ಜಯಂತ್ ನಡುಬೈಲು, ಆರ್. ಸಿ. ನಾರಾಯಣ್, ಶಶಿಧರ್ ಕಿನ್ನಿಮಜಲು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಪರಿಸರದಲ್ಲೇ ಕೋಟಿ ಚೆನ್ನಯರ ಬದುಕಿನ ಘಟನಾವಳಿಗಳು ನಡೆದಿರುವ ಕಾರಣ ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವುದು ಸೂಕ್ತ ಎಂದು ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2019 ರಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ಮನವಿ ನೀಡಲಾಗಿತ್ತು.

























