ಬೆಳ್ತಂಗಡಿ: ದುಬೈನಲ್ಲಿ ಅ.11 ರಂದು ನಡೆದ ಬೈಕ್ ಅಪಘಾತದಲ್ಲಿ ಕುವೆಟ್ಟು ಗ್ರಾಮದ ಸಬರಬೈಲ್ ಬಳಿಯ ನಿವಾಸಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕುವೆಟ್ಟು ಗ್ರಾಮದ ಸಬರಬೈಲ್ ಬಳಿಯ ನಿವಾಸಿ ಸಿರಿಲ್ ರೋಡ್ರಿಗಸ್ ಅವರ ಪುತ್ರ ಕ್ಲೇವಿನ್ ಅವಿನ್ ರೋಡ್ರಿಗಸ್ (25) ಎಂದು ಗುರುತಿಸಲಾಗಿದೆ.
ಅವಿನ್ ಉದ್ಯೋಗಕ್ಕಾಗಿ ವಿಸಿಟಿಂಗ್ ವೀಸಾದಲ್ಲಿ ಆರು ತಿಂಗಳ ಹಿಂದೆ ದುಬೈಗೆ ಹೋಗಿದ್ದರು. ಅಲ್ಲಿ ಅವರಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗವೂ ದೊರಕ್ಕಿತ್ತು. ಇನ್ನೊಂದು ವಾರದಲ್ಲಿ ಭಾರತಕ್ಕೆ ಹಿಂದಿರುಗಲಿದ್ದರು. ಅ.11ರ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಅವಿನ್ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ಪೆಟ್ಟಾಗಿ ಮೃತಪಟ್ಟರು.
ದುಬೈ ಸರಕಾರದ ನಿಯಮಾವಳಿಯಂತೆ ಮೃತದೇಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಟ್ಟಿದ್ದು, ಇಂದು ಬೆಳ್ತಂಗಡಿಗೆ ಬರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅವಿವಾಹಿತರಾಗಿದ್ದ ಮೃತರು ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.


























