ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಯೋಜನೆ ಮಾಡಿ ಆದೇಶಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿಗಮದ 05 ಅಧಿಕಾರಿ ಹಾಗೂ 15 ಸಿಬ್ಬಂದಿಗಳನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಕೇಂದ್ರ ಕಛೇರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಎರವಲು ಸೇವೆಯ ಆಧಾರದ ಮೇಲೆ ನಿಯೋಜಿಸಲು ಸಕ್ಷಮ ಅಧಿಕಾರಿಗಳು ಅನುಮೋದಿಸಿದ್ದಾರೆ.
ಪುತ್ತೂರು ವಿಭಾಗ ಸುಳ್ಯ ಘಟಕದ ಘಟಕ ವ್ಯವಸ್ಥಾಪಕರಾದ ಸತ್ಯಲತಾ, ಪುತ್ತೂರು ವಿಭಾಗ ಸಹಾಯಕ ಸಂಚಾರ ಅಧೀಕ್ಷಕಿ ವಿಜಯಲಕ್ಷ್ಮೀ ಪಿ.ಸಿ. ರನ್ನು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ..



























