ಬೆಳ್ತಂಗಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಅಣ್ಣ ತಂಗಿ ಸೇರಿ ಮೂವರು ಗಾಯಗೊಂಡ ಘಟನೆ ಬೆಳಾಲಿನ ನೆಕ್ಕಲದಲ್ಲಿ ನಡೆದಿದೆ.

ಬೈಕ್‌ನಲ್ಲಿದ್ದ ಕೊಯ್ಯೂರು ಗ್ರಾಮದ ಜೆಂಕಿನಡ್ಕ ನಿವಾಸಿ ಉಮೇಶ್ ಗೌಡರ ಮಗ ಕಾರ್ತಿಕ್ (20), ಮತ್ತು ಮಗಳು ಕೃಪಾ (18) ಅವರ ತಲೆ ಹಾಗೂ ಕಾಲಿಗೆ ಗಾಯವಾಗಿದೆ.
ಮತ್ತೊಂದು ಬೈಕ್ ಸವಾರ ಡೆಲಿವರಿ ಬಾಯ್ ಫೈರೋಜ್ ಅವರ ಕಾಲಿಗೆ ಗಾಯಗೊಂಡಿದ್ದು, ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ತಿಕ್ ಮತ್ತು ಕೃಪಾ ಮನೆಯಿಂದ ಬೈಕ್‌ನಲ್ಲಿ ಬೆಳಾಲು ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಬೆಳಾಲಿನಿಂದ ಬೆಳ್ತಂಗಡಿ ಕಡೆಗೆ ಡೆಲಿವರಿ ಬಾಯ್ ಫೈರೋಜ್ ಬರುತ್ತಿದ್ದಾಗ ಅಪಘಾತ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























