ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಬೆದರಿಕೆ ಪತ್ರವೊಂದು ಬಂದಿದ್ದು ಆತಂಕ ಮೂಡಿಸಿದೆ.
ಕೇದಾರನಾಥ, ಬದರಿನಾಥ ದೇಗುಲಗಳು ಹಾಗೂ ಇತರೆ ಧಾರ್ಮಿಕ ಸ್ಥಳಗಳು ಮತ್ತು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿದೆ. ಹರಿದ್ವಾರ ರೈಲು ನಿಲ್ದಾಣದಲ್ಲಿ ಈ ಪತ್ರ ಪತ್ತೆಯಾಗಿದೆ.
ಅಕ್ಟೋಬರ್ 25 ಮತ್ತು 27 ರಂದು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಜಮೀರ್ ಅಹ್ಮದ್ ಎಂಬಾತ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಹಾದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ. ಕೂಡಲೇ ಎಚ್ಚೆತ್ತ ಉತ್ತರಾಖಂಡ್ ಸರ್ಕಾರ ರಾಜ್ಯಾದ್ಯಂತ ಹೈ-ಅಲರ್ಟ್ ಘೋಷಣೆ ಮಾಡಿದೆ.


























