ಉಪ್ಪಿನಂಗಡಿ: ಈಚರ್ ಲಾರಿಯ ಚಕ್ರ ಮಣ್ಣಿನಲ್ಲಿ ಹೂತು ಲಾರಿ ರಸ್ತೆ ಮಧ್ಯೆ ಬಾಕಿಯಾದ ಘಟನೆ ಶಾಂತಿನಗರದ ಬೇರಿಕೆ ಎಂಬಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಈಚರ್ ಲಾರಿಯ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದು, ಈ ಹಿನ್ನೆಲೆ ಲಾರಿಯು ರಸ್ತೆ ಮಧ್ಯೆ ಬಾಕಿಯಾಗಿದೆ.

ರಸ್ತೆ ಕಾಮಗಾರಿಯು ನಡೆಯುತ್ತಿದ್ದು, ಲೋಡ್ ತುಂಬಿದ ಲಾರಿಯಾದ ಹಿನ್ನೆಲೆ ಲಾರಿಯ ಚಕ್ರವು ಮಣ್ಣಿನಡಿ ಬೇಗನೆ ಹೂತು ಹೋಗಿದೆ ಎನ್ನಲಾಗಿದೆ. ರಸ್ತೆ ಮಧ್ಯೆ ಬಾಕಿಯಾಗಿದ್ದರಿಂದ ಬೇರೆ ವಾಹನಗಳಿಗೆ ತೆರಳಲು ಕಷ್ಟವಾಗುತ್ತಿದ್ದು, ಹಿಟಾಚಿ ಮೂಲಕ ಲಾರಿಯ ಚಕ್ರವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ..



























