ಮಂಗಳೂರು: ಯುವಕನೋರ್ವ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕುದ್ರೋಳಿಯಲ್ಲಿ ನಡೆದಿದೆ.
ಕುದ್ರೋಳಿ ಸಮೀಪದ ಕಂಡತ್‌ಪಳ್ಳಿ ಬಳಿಯಲ್ಲಿ ತರಕಾರಿ ಅಂಗಡಿ ಹೊಂದಿರುವ ಟಿಕೆಎಚ್ ಖಾದರ್ ಎಂಬವರ ಪುತ್ರ ಮಹಮ್ಮದ್ ರಿಯಾಝ್ (34) ಮೃತ ಯುವಕ.

ರಿಯಾಝ್ ಸಮೀಪದ ಮನೆಯೊಂದರ ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡರು ಎಂದು ಹೇಳಲಾಗಿದ್ದು, ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೇ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.


























