ಪುತ್ತೂರು: ಕಬಕ- ವಿಟ್ಲ ರಸ್ತೆಯು ಕಳೆದ ಹಲವು ವರ್ಷಗಳಿಂದ ಹದೆಗೆಟ್ಟಿದ್ದು ಇದರಿಂದಾಗಿ ಜನಸಾಮಾನ್ಯರು, ವಾಹನ ಸವಾರರು, ರಿಕ್ಷಾ ಚಾಲಕರು, ದೊಡ್ಡ ದೊಡ್ಡ ವಾಹನ ಚಾಲಕರಿಗೆ ದಿನನಿತ್ಯ ಸಮಸ್ಯೆ ಆಗುತ್ತಿದ್ದು, ಈಗಾಗಲೇ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಸರಕಾರ ಈ ರಸ್ತೆಗೆ 13 ಕೋಟಿ ವೆಚ್ಚದಲ್ಲಿ 15 ದಿವಸದಲ್ಲಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಭರವಸೆ ನೀಡಿದ್ದು ಇದನ್ನು ಸರಕಾರ ಶೀಘ್ರವಾಗಿ ಆರಂಭಿಸಬೇಕು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಹನೀಫಿ ಬಗ್ಗುಮೂಲೆ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.


























