ಬೆಳ್ತಂಗಡಿ: ಶಿಶಿಲ ಗ್ರಾಮದ ಅಂಚಿನಡ್ಕದ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು, ಇಸ್ಪೀಟ್ ಜುಗಾರಿ, ಆಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 9 ಮಂದಿ ಹಾಗೂ ಸ್ಥಳದಲ್ಲಿದ್ದ ನಗದು ಸಹಿತ 1,01,370 ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಜುಗಾರಿಯಲ್ಲಿ ನಿರತರಾಗಿದ್ದ ಶಿಶಿಲ ಗ್ರಾಮದ ಓಟ್ಲ ನಿವಾಸಿ ವೆಂಕಪ್ಪ (55), ಪರಾರಿ ಬಾಳ ಹಿತ್ತಿಲು ವಸಂತ ಗೌಡ (48), ನಾಗನಡ್ಕ ಮನೆ ಕೃಷ್ಣಪ್ಪ ಗೌಡ (45), ಐಂಗುಡ ಮನೆ ಶಿವರಾಮ ಗೌಡ (53), ಅಂಬೆತ್ತಡ್ಕ ಸದಾಶಿವ (38), ಮುಳಿಮಜಲು ಪೊಡಿಯಾ (50), ಅಂಬೆತ್ತಡ್ಕ ಹೊನ್ನಪ್ಪ ಗೌಡ (47), ಮಚ್ಚಿರಡ್ಕ ಸುರೇಶ (33), ಮುಳಿಮಜಲು ಕೇಶವ (42) ರನ್ನು ವಶಕ್ಕೆ ಪಡೆಯಲಾಗಿದೆ.
ಪಣವಾಗಿಟ್ಟ ನಗದು 11,370 ರೂ. ಹಾಗೂ ದ್ವಿಚಕ್ರ ವಾಹನ, ಮಾರುತಿ ಓಮ್ನಿ, ನಗದು ಹಾಗೂ ಸೊತ್ತುಗಳು ಸೇರಿ ಅಂದಾಜು 1,01,370 ರೂ. ಸೊತ್ತು ವಶಕ್ಕೆ ಪಡೆಯಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























