ಬೆಂಗಳೂರು: ಕೊರಗಜ್ಜ ಹಿಂದೂ ದೇವರಲ್ಲ, ಹಿಂದೂ ಸಂಸ್ಕೃತಿಗೆ ಸೇರಿಲ್ಲ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ ಎಂದು ಆ ದಿನಗಳು ಖ್ಯಾತಿಯ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಚೇತನ್, ನಮಗೆ ಕಾಂತಾರ ಸಿನಿಮಾ ಬಗ್ಗೆ ಹೆಮ್ಮೆ ಇದೆ. ನಮ್ಮ ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಒಳ್ಳೆ ರೆಸ್ಪಾನ್ ಸಿಕ್ಕಿದೆ. ಕರ್ನಾಟಕ ಸಂಸ್ಕೃತಿಯ ಬಗ್ಗೆ ಕಾಂತಾರ ಸಿನಿಮಾ ಹೆಮ್ಮೆಯಿಂದ ತೋರಿಸಿದೆ. ಆದರೆ ಸಿನಿಮಾ ಬಗ್ಗೆ ಮಾತನಾಡುವ ವೇಳೆ ನಿರ್ದೇಶಕರು, ಈ ಭೂತಕೋಲ ಹಿಂದೂ ಧರ್ಮದ ಆಚರಣೆ ಎಂದು ಹೇಳಿದ್ದಾರೆ.
ಆದರೆ ಕೊರಗಜ್ಜ ಹಿಂದೂ ಸಂಸ್ಕೃತಿ ಆಚರಣೆ ಅಲ್ಲ. ಇದು ಭಾರತದ ಮೂಲ ನಿವಾಸಿಗಳ ಪರಂಪರೆ, 75 ಸಾವಿರ ವರ್ಷಗಳ ಹಿಂದೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆಚರಣೆಯಾಗಿತ್ತು. 3,500 ವರ್ಷಗಳ ಹಿಂದಿನ ವೈಧಿಕ ಪರಂಪರೆಯಾಗಿದ್ದು, ಇದಕ್ಕೆ ಅದರದ್ದೆ ಆದ ವಿಶೇಷತೆ ಇದೆ. ಪಂಬದ, ನಲಿಕೆ, ಪರವ ಎಂಬುವುದು ಬುಡಕಟ್ಟು, ಅಲೆಮಾರಿ, ಅರೆ ಅಲೆಮಾರಿ ಪರಂಪರೆಯಾಗಿದೆ.
ಮೂಲಭೂತ ಪರಂಪರೆಯಿಂದ ಪರಿಸರ ಆರಾಧನೆ, ಭೂತಕೋಲ, ಪಿಲಿ ಚಾಮುಂಡಿ, ಪಂಜುರ್ಲಿ ವಿಚಾರಗಳು ಮೂಲ ಸಂಸ್ಕೃತಿಯಾಗಿದೆ. ಇವುಗಳು ಹಿಂದೂ ಧರ್ಮದ ಆಚರಣೆ ಅಂತ ಹೇಳೋದು ತಪ್ಪಾಗುತ್ತದೆ. ಇಲ್ಲಿನ ಸಮುದಾಯಗಳ ಭಾಷೆಯೇ ವಿಶೇಷವಾಗಿದೆ. ಆದರೆ ಇದೆಲ್ಲವೂ ತೆಗೆದುಕೊಂಡು ಇದು ಹಿಂದೂ ಧರ್ಮದ ಭಾಗ ಅಂತ ಹೇಳ್ತಿರೋದು ತಪ್ಪಾಗುತ್ತದೆ ಎಂದರು.
ಹಿಂದೂಸ್ತಾನ್ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಚತುವರ್ಣ, ಮನು ಧರ್ಮ, ಭಗವದ್ಗೀತೆ ಇವೆಲ್ಲ ಹಿಂದೂ ಧರ್ಮದ ವೈದಿಕ ಪರಂಪರೆ., ಕೊರಗಜ್ಜ, ಮಂಟೆಸ್ವಾಮಿ, ಬಸವಣ್ಣ, ವಚನಕಾರರು ಎಲ್ಲವು ಕೂಡ ಅವೈದಿಕ ಪರಂಪರೆ, ವೈದಿಕ ಪರಂಪರೆಗಿಂತ ಮೂಲ ನಿವಾಸಿಗಳ ಧರ್ಮ ಬೇರೆ, ಪಂಜುರ್ಲಿ ಬೇರೆ. ವರಾಹ ಅನ್ನೋ ಪದದ ತರೋದು ವಿಷ್ಣುವಿನ ಅವತಾರ ಅಲ್ಲ. ಭೂತ ಕೋಲ ಹಿಂದೂ ಧರ್ಮ ಈಗ ಅವರಿಸಿಕೊಂಡಿದೆ.
ವರಹಾ ಅನ್ನೋದು ಸಂಸ್ಕೃತ ಪದವಾಗಿದೆ. ವಿಷ್ಣುವಿನ ದಶಾವತರ, ವರಾಹ ಪಂಬಧದ ದೇವರಲ್ಲ ಎಂದರು. ಜಾರ್ಖಂಡ್, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೂಲ ನಿವಾಸಿಗಳು ಹಿಂದೂ ಧರ್ಮಕ್ಕೆ ತಮ್ಮನ್ನು ಸೇರಿಸದೆ, ಪ್ರತ್ಯೇಕ ಮಾಡಿ ಎಂದು ಹೋರಾಟ ಮಾಡಿದ್ದಾರೆ. ನಾನು ಕೂಡ ಈ ಪ್ರತಿಭಟನೆಗೆ ಬೆಂಬಲ ನೀಡಿದ್ದೇನೆ. ಪಂಜುರ್ಲಿ ಅನ್ನೋದು ಸತ್ಯ, ಈ ಸಂಸ್ಕೃತಿಯಲ್ಲಿ ದಿನ ಪೂಜೆ ಮಾಡೋದಿಲ್ಲ. ಇಲ್ಲಿ ಬ್ರಹ್ಮಣ್ಯ ಅನ್ನೋದು ಇರೋದಿಲ್ಲ. ಭಾರತದಲ್ಲಿ ಹಿಂದಿ ಹೇರಿಕೆಯನ್ನು ಹೇಗೆ ಒಪ್ಪಲು ಸಾಧ್ಯವಿಲ್ಲವೋ, ಹಿಂದುತ್ವವನ್ನು ಹೇರಲು ಒಪ್ಪಲು ಆಗೋದಿಲ್ಲ ಎಂದರು…


























