ಬಂಟ್ವಾಳ: ಹಲವು ವರ್ಷಗಳ ಹಿಂದಿನ ಕೊಲೆಯತ್ನ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ.
ಕಾಸರಗೋಡು, ಕುಂಜತ್ತೂರು ತೂಮಿನಾಡು ನಿವಾಸಿ ಮಹಮ್ಮದ್ ಫಾರೂಕ್ ಬಂಧಿತ ಆರೋಪಿ.

ಬಂಟ್ವಾಳ ನಗರ ಪೊಲೀಸ್ ಠಾಣಾಯಲ್ಲಿ ಅ.ಕ್ರ. 201/2007 U/s 341, 324, 307 rw 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ( Pri.District & Session Judge, Mangaluru ಇಲ್ಲಿಯ ಸ್ವೆಷಲ್ ಕೇಸ್ ನಂಬರ್ 20/2010, LPC No: 2/2012) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಧನರಾಜ್, ಸಿಬ್ಬಂದಿಗಳಾದ ಗಣೇಶ್, ರಾಜೇಶ್, ಇರ್ಷಾದ್ ರವರು ಕೇರಳದ ಬಂದ್ಯೋಡು ಎಂಬಲ್ಲಿಂದ ಆರೋಪಿಯನ್ನು ದಸ್ತಗಿರಿ ಮಾಡಿ ಸತ್ರ ನ್ಯಾಯಾಲಯ ಮಂಗಳೂರಿಗೆ ಹಾಜರು ಪಡಿಸಿದ್ದು, ಎಲ್ ಪಿಸಿ ಆಗಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ..


























