ಅಯೋಧ್ಯೆ ರಾಮಮಂದಿರ ಕೆಡವಿ ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಪಿಎಫ್ಐ ಸಂಚು ರೂಪಿಸಿತ್ತು ಎಂಬ ಸ್ಪೋಟಕ ಮಾಹಿತಿ ತನಿಖೆ ವೇಳೆ ಬಯಲಾಗಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆ ರಾಮಮಂದಿರ ಕೆಡವಿ ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಪಿಎಫ್ಐ ಸಂಚು ರೂಪಿಸಿತ್ತು ಎಂಬ ಮಾಹಿತಿಯನ್ನು ನಾಶಿಕ್ ಕೋರ್ಟ್ ಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಬಂಧಿತರಾದವರನ್ನು ವಿಚಾರಣೆ ನಡೆಸಿದಾಗ ಇಂತಹ ಸ್ಫೋಟಕ ಮಾಹಿತಿ ಲಭಿಸಿದೆ ಎಂದು ಕೋರ್ಟ್ ಗೆ ಸರಕಾರ ತಿಳಿಸಿದೆ ಎಂದು ತಿಳಿದು ಬಂದಿದೆ.
2047ರ ವೇಳೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡೋ ಉದ್ದೇಶವನ್ನು ಪಿಎಫ್ಐ ಹೊಂದಿತ್ತು ಎಂಬ ಮಾಹಿತಿ ಲಭಿಸಿದೆ. ಮಾಲೆಂಗಾವ್ ನಲ್ಲಿ ಐವರು ಪಿಎಫ್ಐ ಮುಖಂಡರನ್ನು ಮಹಾ ಎಟಿಎಸ್ ಬಂಧಿಸಿದ್ದು, ಅವರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಲಭಿಸಿದೆ.
ರಾಮಮಂದಿರದ ಸ್ಫೋಟಕ್ಕಾಗಿ ಉಗ್ರರು ಪಾಕಿಸ್ತಾನದಲ್ಲೇ ಕುಳಿತು ವಾಟ್ಸಪ್ ಗ್ರೂಪ್ ರಚಿಸಿದ್ದು, ವಾಟ್ಸಪ್ ಗ್ರೂಪ್ ಗಳ ಮೂಲಕವೇ ರಾಮಮಂದಿರದ ಸ್ಫೋಟ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಲಭಿಸಿದೆ ಎಂದು ತಿಳಿದು ಬಂದಿದೆ.
























