ಪುತ್ತೂರು: ತಮ್ಮ ರಗಡ್ ಲುಕ್, ’ಮಾಸ್ತರ ಮಗಳೇ’ ಎಂಬ ಗಡಸು ದನಿಯ ಡೈಲಾಗ್ ನಿಂದಲೇ ಕನ್ನಡಿಗರ ಮನಗೆದ್ದ ’ಗಿಣಿರಾಮ’ ಧಾರವಾಹಿ ಖ್ಯಾತಿಯ ಶಿವರಾಮ್ ಅಲಿಯಾಸ್ ರಿತ್ವಿಕ್ ಮಠದ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅ.20 ರಂದು ಭೇಟಿ ನೀಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧ್ಯ ಭಕ್ತರಾಗಿರುವ ರಿತ್ವಿಕ್ ಮಠದ್ ಅವರು ಐದನೇ ಬಾರಿ ಹತ್ತೂರ ಒಡೆಯನ ಸನ್ನಿಧಾನಕ್ಕೆ ಆಗಮಿಸಿದ್ದು, ಪತ್ನಿಯ ಜೊತೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು.

ಉತ್ತರ ಕನ್ನಡ ಭಾಷೆಯನ್ನು ಒಳಗೊಂಡಿರುವ ’ಗಿಣಿರಾಮ’ ಸೀರಿಯಲ್ ಗೆ ಪುತ್ತೂರಿನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..























