ಬಂಟ್ವಾಳ : ಆರ್.ಟಿ.ಒ ಕಚೇರಿಗೆ ಮಾಜಿ ಸಚಿವ ರಮಾನಾಥ ರೈ ರವರು ಅ.20 ರಂದು ಧಿಡೀರ್ ಭೇಟಿ ನೀಡಿದರು.

ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಏಜೆನ್ಸಿ ರಿಪ್ಲೇಕ್ಟ್ ಗೂಡ್ಸ್ ಸಾರಿಗೆ ವಾಹನಕ್ಕೆ ರಿಪ್ಲೇಕ್ಟ್ ಅಳವಡಿಸಿವುದನ್ನು ಖಾಸಗಿಯವರಿಗೆ ಗುತ್ತಿಗೆ ಕೊಟ್ಟು 200,300.ರೂ ಇದ್ದ ದರವನ್ನು 1500,1700ವರೆಗೆ ಏರಿಸಿದ್ದು ದೊಡ್ಡ ಸರಿಗೆ ವಾಹನಗಳಿಗೆ 3,500 ಸಾವಿರದಿಂದ 5,000 ವರೆಗೆ ದರ ನಿಗದಿ ಪಡಿಸಿರುವುದು ಚಿಕ್ಕ ಹಾಗೂ ದೊಡ್ಡ ವಾಹನಗಳ ಮಾಲೀಕರಿಗೆ ಹೊಟ್ಟೆಗೆ ಹೊಡೆದ ಹಾಗೆ ಆಗಿದೆ ಇದ್ದನ್ನು ತಕ್ಷಣ ನಿಲ್ಲಿಸಿ ಚಾಲಕರಿಗೆ ಹಾಗೂ ಮಾಲಕರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಮಾಜಿ ಸಚಿವ ಬಿ. ರಮಾನಾಥ ರೈ ಯವರು ವಿನಂತಿಸಿದರು.

ಈ ಸಂದರ್ಭದಲ್ಲಿ ಸುದೀಪ್ ಕುಮಾರ್ ಶೆಟ್ಟಿ , ಬೇಬಿ ಕುಂದರ್, ಪದ್ಮನಾಭ ರೈ, ಅಬ್ಬಾಸ್ ಅಲಿ, ಸುಭಾಷ್ಚಂದ್ರ ಶೆಟ್ಟಿ,ಲೋಕೇಶ್ ಪೂಜಾರಿ,ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.



























