ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಜನಸೇವಾ ಕೇಂದ್ರದ ವತಿಯಿಂದ ಅ.26 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ದಶ ಸಂಭ್ರಮ’, ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ ನಡೆಯಲಿದ್ದು, ಈ ಹಿನ್ನೆಲೆ ‘ಗೂಡು ದೀಪ’ ರಚನಾ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಅ.26 ರಂದು ಬೆಳಿಗ್ಗೆ 9 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಗೂಡು ದೀಪದೊಂದಿಗೆ ಹಾಜರಾಗಬೇಕಾಗಿದೆ.
ಪ್ರಥಮ ಬಹುಮಾನ : 7,500 ರೂ., ದ್ವಿತೀಯ ಬಹುಮಾನ : 5000 ರೂ., ತೃತೀಯ ಬಹುಮಾನ : 2500 ರೂ. ಆಗಿದ್ದು ಯಾವುದೇ ರೆಡಿಮೇಡ್ ಗೂಡುದೀಪಗಳಿಗೆ ಅವಕಾಶವಿಲ್ಲ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8496006816, 9901347446 ಅನ್ನು ಸಂಪರ್ಕಿಸ ಬಹುದಾಗಿದೆ.


























