ಈಶ್ವರಮಂಗಲ: ಕೆಲ ಸಮಯದ ಹಿಂದೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ರವರ ಕನಸಿನ ಮನೆ ನಿರ್ಮಾಣ ಅಡಿಪಾಯ ಹಂತದಲ್ಲಿ ನಿಂತು ಹೋಗಿದ್ದು, ಮನೆಯನ್ನು ಪಂಚಾಯತ್ ಅನುದಾನ ಮತ್ತು ಇತರ ಸಂಘ-ಸಂಸ್ಥೆಗಳ ಸಹಕಾರದಿಂದ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಿರ್ಮಿಸಲು ಮುಂದಾಗಿದೆ.

ಅ.21 ರಂದು ಮನೆ ನಿರ್ಮಾಣದ ಸ್ಥಳದಲ್ಲಿ ದೇವತಾ ಪ್ರಾರ್ಥನೆ ಮೂಲಕ ಆರಂಭಿಸಲಾಯಿತು.
ದೀಪಾವಳಿ ಪ್ರಯುಕ್ತ ಅ.23 ರಿಂದ 26ರ ವರೆಗೆ ಈಶ್ವರಮಂಗಲದಲ್ಲಿ ‘ಜಾಗರಣ ಪಟಾಕಿ ಮಳಿಗೆ’ಯಲ್ಲಿ ಮಾರಾಟ ಮಾಡಲಾಗುವ ಪಟಾಕಿಗಳ ಸಂಪೂರ್ಣ ಲಾಭಾಂಶ ಮನೆ ನಿರ್ಮಾಣಕ್ಕೆ ವಿನಿಯೋಗಿಸುವುದಾಗಿದೆ ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಇತರ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.



























