ಪುತ್ತೂರು: ವ್ಯಕ್ತಿಯೋರ್ವರ ದೇಹದ ಎಲುಬು ಪತ್ತೆಯಾದ ಘಟನೆ ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ನಡೆದಿದೆ.

ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯೋರ್ವರ ದೇಹದ ಎಲುಬು ಪತ್ತೆಯಾಗಿದ್ದು, ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಯನ್ನು ತಾರಿಗುಡ್ಡೆ ಪರಿಸರದವರೆಂದು ಶಂಕಿಸಲಾಗಿದೆ. ಎಲುಬು ಪತ್ತೆಯಾಗಿದ್ದು, ವ್ಯಕ್ತಿ ಮೃತಪಟ್ಟು ಸುಮಾರು ಸಮಯಗಳೇ ಕಳೆದಿದೆ ಎನ್ನಲಾಗುತ್ತಿದೆ.

ಎಲುಬು ಸಿಕ್ಕಿದ ಜಾಗದಲ್ಲಿ ಗಿಡಗಂಟಿಗಳು ತುಂಬಿದ್ದರಿಂದ ಯಾರಿಗೂ ಈವರೆಗೆ ತಿಳಿಯದೆ ಇದ್ದು, ಇಂದು ಹುಲ್ಲು ತೆಗೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ..


























