ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಅ.22 ರಂದು ಕನ್ಯಾನದಲ್ಲಿ ನಡೆದಿದೆ.

ಮೃತರನ್ನು ಕನ್ಯಾನ ನಿವಾಸಿ ಯೋಗಿಶ್(34) ಎಂದು ಗುರುತಿಸಲಾಗಿದೆ.
ಯೋಗಿಶ್ ರವರು ಕನ್ಯಾನದ ವೈನ್ ಶಾಪ್ ವೊಂದರಲ್ಲಿ ಅಕೌಂಟ್ಸ್ ನೋಡುವ ಕೆಲಸ ನಿರ್ವಹಿಸುತ್ತಿದ್ದರು.
ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


























