ಪುತ್ತೂರು: ರೈಲಿನಡಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಅ.23 ರಂದು ಮುರದಲ್ಲಿ ನಡೆದಿದೆ.

ಮೃತರನ್ನು ಕಲ್ಲೇಗ ನಿವಾಸಿ, ಕೂಲಿ ಕೆಲಸ ನಿರ್ವಹಿಸುತ್ತಿದ್ದ ವಿಜಯ ಎಂದು ಗುರುತಿಸಲಾಗಿದೆ.
ವಿಜಯ ರವರು ಕಾರ್ಯಕ್ರಮವೊಂದಕ್ಕೆ ಬಂದು ವಾಪಸ್ಸು ಮನೆಗೆ ರೈಲ್ವೇ ಹಳಿ ಮೇಲೆ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹಲವಾರು ಜನ ಜಮಾವಣೆಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..


























