ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ವತಿಯಿಂದ ಈಶ್ವರಮಂಗಲದಲ್ಲಿ ನಡೆಸುತ್ತಿರುವ ಪಟಾಕಿ ಮಳಿಗೆಗೆ
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ರವರು
ಭೇಟಿ ನೀಡಿ ಶುಭ ಹಾರೈಸಿದರು.

ಸದಾಶಿವ ರೈ ನಡುಬೈಲು ಮುತಾಲಿಕ್ ರವರಿಗೆ ಶಾಲು ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹ ಸಂಯೋಜಕ ರಾಜೇಶ್ ಪಂಚೋಡಿ, ಘಟಕದ ಅಧ್ಯಕ್ಷ ಪ್ರಜ್ವಲ್, ಪ್ರವೀಶ್, ಚರಣ್, ಸತೀಶ್, ಜೀವನ್ ಮತ್ತು ಸಂಘಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.



























