ವಿಟ್ಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಇದರ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಪಕಳಕುಂಜ ಶಾಲಾ ವಠಾರದಲ್ಲಿ ನಡೆಯಿತು.

ಶ್ರೀಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ದೀಪೋಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ಪಕಳಕುಂಜ ಗೋಪಾಲ ಕೃಷ್ಣ ಭಟ್ ಮತ್ತು ಮಾಣಿಮೂಲೆ ಮಾಧವ ಭಟ್ ಉಪಸ್ಥಿತರಿದ್ದರು.

ಕ್ರೀಡಾ ಕೂಟದಲ್ಲಿ ದೇಶೀಯ ಕ್ರೀಡೆಗಳಾದ ಕಬಡ್ಡಿ, ಹಗ್ಗಜಗ್ಗಾಟ, ನಿಂಬೆ ಚಮಚ, 100 ಮೀಟರ್ ಓಟ, 200 ಮೀಟರ್ ಓಟ, ತೀರ್ಥಕ್ಷೇತ್ರ ,ಬೆಂಕಿ ಚೆಂಡು ಮುಂತಾದ ಆಟಗಳನ್ನು ಆಡಿಸಲಾಯಿತು. ಈ ಸಂದರ್ಭದಲ್ಲಿ ಹನುಮಾನ್ ಫ್ರೆಂಡ್ಸ್ ಪೆರುವಾಯಿ ಇವರಿಂದ ನಾಸಿಕ್ ಬ್ಯಾಂಡ್ ನ ಮೂಲಕ ಕಾರ್ಯಕ್ರಮಕ್ಕೆ ಮೆರುಗು ದೊರಕಿತು.

ಸಂಜೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾಗಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷರಾದ ಪದ್ಮನಾಭ ಕಟ್ಟೆ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತರಾದ ಎಸ್ ನಾರಾಯಣ ಅವರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಾಳೆಕಾನ ಕೃಷ್ಣ ಭಟ್, ಶೋಭ ಶಂಕರ ಗುಳಿ, ನಿವೇದಿತ ಮಾಣಿಮೂಲೆ , ಉದಯ ನಾಯಕ್ ಪಕಳಕುಂಜ , ಉದಯ ಶೆಟ್ಟಿ ಸಾಯ, ಗೋವಿಂದ ನಾಯ್ಕ ಕೊಮ್ಮುಂಜೆ ಅವರು ಉಪಸ್ಥಿತರಿದ್ದರು.

ಕ್ರೀಡಾಕೂಟದ ನಿರ್ವಹಣೆಯನ್ನು ಶಿವಪ್ರಸಾದ್ ರೈ ಪೆರುವಾಯಿ, ಸುನಿಲ್ ಕಾಮಜಲು, ಅಶೋಕ್ ಬೆರಿಪ್ಪದವು ಮತ್ತು ಬ್ರಿಜೇಶ್ ಸೇರಾಜೆ ನಿರ್ವಹಿಸಿದರು. ಸಭಾ ಕಾರ್ಯಕ್ರಮವನ್ನು ಗಿರೀಶ್ ಕೋಟ್ಯಾನ್ ನಿರ್ವಹಿಸಿದರು. ಅಶೋಕ್ ಶೆಟ್ಟಿ ಬಿರ್ಕಾಪು ವಂದಿಸಿದರು.



























