ಪುತ್ತೂರು: ನಾಳೆ (ಅ.25) ಸೂರ್ಯಗ್ರಹಣ ಇರುವುದರಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ.
ಸ್ವಾತಿ, ಚಿತ್ರಾ, ವಿಶಾಖ, ಅನುರಾಧ, ಜೇಷ್ಠ, ಕೃತಿಕಾ, ರೋಹಿಣಿ, ಮೃಗಶಿರ, ಪೂರ್ವಭಾದ್ರ, ಉತ್ತರಾಭಾದ್ರ, ರೇವತಿ ನಕ್ಷತ್ರದವರಿಗೆ ಗ್ರಹಣ ದೋಷವಿದೆ. ಗ್ರಹಣ ಶಾಂತಿ ಹೋಮ ಮಾಡಿಸುವ ಭಕ್ತರು ದೇವಳದ ಕೌಂಟರ್‌ನಲ್ಲಿ ರಶೀದಿ ಪಡೆದು, ಸಂಜೆ ಗಂಟೆ 5.09ಕ್ಕೆ ಪ್ರಾರಂಭಗೊಳ್ಳುವ ಗ್ರಹಣ ಶಾಂತಿ ಹೋಮದಲ್ಲಿ ಪಾಲ್ಗೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ..




























