ಪುತ್ತೂರು: ಹಣವನ್ನು ಪಣವಾಗಿಟ್ಟು ‘ತಲೈ-ಪೊಲ್ಲೈ’ ಎಂಬ ಜೂಜಾಟವಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿಯಲ್ಲಿ ನಡೆದಿದೆ.
ಜ್ಞಾನ ಪ್ರಕಾಶ್, ಗೋಪಾಲ ಕೃಷ್ಣ, ವನರಾಜ್, ರವೀಂದ್ರ, ಗೋವಿಂದ, ಉದಯ ಕುಮಾರ್, ಸುಧಾಕರ ಬಂಧಿತ ಆರೋಪಿಗಳು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪ-ನಿರೀಕ್ಷಕರು ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿ ಬಳಿಯ ಸಾರ್ವಜನಿಕ ತೆರೆದ ಮೈದಾನದಲ್ಲಿ ಯಾವುದೇ ಅನುಮತಿ ಇಲ್ಲದೇ ಕೆಲವು ಜನರು ಹಣವನ್ನು ಪಣವಾಗಿಟ್ಟು ‘ತಲೈ-ಪೊಲ್ಲೈ’ ಎಂಬ ಜೂಜಾಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದಿದ್ದು, ಈ ವೇಳೆ ಸದ್ರಿ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಪರಿಶೀಲಿಸಲಾಗಿ ಸದ್ರಿ ಸ್ಥಳದಲ್ಲಿ ಕೆಲವರು ಸೇರಿ ಹಣವನ್ನು ಪಣವಾಗಿಟ್ಟು ‘ತಲೈ-ಪೊಲ್ಲೈ’ ಎಂಬ ಜೂಜಾಟ ಆಡುತ್ತಿರುವುದು ಖಚಿತವಾಗಿರುತ್ತದೆ.
ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪುತ್ತೂರು ಗ್ರಾಮಾಂತರ ಠಾಣಾಧಿಕಾರಿಯವರಿಗೆ ವರದಿ ನೀಡಿದ್ದು, ಸದ್ರಿ ವರದಿಯನ್ನು ಠಾಣಾ ಎನ್.ಸಿ,.ನಂ. 472/2022 ರಂತೆ ದಾಖಲಿಸಿಕೊಂಡು ಇದು ಜೂಜಾಟದ ಪ್ರಕರಣವಾಗಿದ್ದು, ಇದೊಂದು ಅಸಂಜ್ಞೇಯ ಪ್ರಕರಣವಾಗಿರುವುದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳುವಂತೆ ಹಿಂಬರಹವನ್ನು ನೀಡಿದ್ದು, ಬಳಿಕ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ ಹಾಜರುಪಡಿಸಿದಂತೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಚರಣೆಯಲ್ಲಿ ಪೊಲೀಸ್ ಉಪ-ನಿರೀಕ್ಷರು(ತನಿಖೆ), ರಾಮಕೃಷ್ಣ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಉದಯರವಿ ಎಂ. ವೈ, ಹೆಚ್.ಸಿ. ಸತೀಶ,
ಹರೀಶ, ಪಿಸಿ ಶಿವಾನಂದ, ಪಿ,ಸಿ ಗಿರೀಶ, ಪ್ರೊಬೇಷನರಿ ಪಿ.ಎಸ್.ಐ. ಕಾರ್ತಿಕ್ ಕೆ., ಪ್ರೊಬೇಷನರಿ ಪಿ.ಎಸ್.ಐ. ಭವಾನಿ ರವರು ಪಾಲ್ಗೊಂಡಿದ್ದರು.
ಆರೋಪಿಗಳನ್ನು ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸಿದ ನಗದು ರೂ. 7222/= ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 97/2022 ಕಲಂ: 87KP Act ರಂತೆ ಪ್ರಕರಣ ದಾಖಲಾಗಿದೆ.