ಪುತ್ತೂರು: ಪ್ರಗತಿಪರ ಕೃಷಿಕ ಸಾರ್ಯಬೀಡು ಸಾಜ ರಾಮಮೋಹನ ರೈ (58) ರವರು ಅ.24 ರಂದು ಮಧ್ಯರಾತ್ರಿ ನಿಧನರಾದರು.
ರಾಮಮೋಹನ ರೈ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಕಿನ್ನಿಂಗಾರು ಬಳಿಯ ಅವರ ಸ್ವಗೃಹ ಪಿಂಡಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಮಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.