ಉಪ್ಪಿನಂಗಡಿ: ಪ್ರಯಾಣಿಕನೋರ್ವ ತಾನು ಬಯಸಿದ ಸ್ಥಳದಲ್ಲಿ ಬಸ್ ನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ ಗೆ ಕಲ್ಲು ಬಿಸಾಡಿ ಬಸ್ ನ ಗಾಜು ಪುಡಿ ಮಾಡಿದ ಘಟನೆ ಅ.24 ರಂದು ನಡೆದಿದೆ.
ಹೆದ್ದಾರಿ ಅಗಲೀಕರಣದ ಕಾಮಗಾರಿಯ ಕಾರ್ಮಿಕನಾಗಿರುವ ವ್ಯಕ್ತಿ ಮದ್ಯ ಸೇವಿಸಿ ಬಸ್ಸನ್ನು ನಿಲ್ಲಿಸಲು ಸೂಚಿಸಿದ್ದಾನೆ. ಆದರೆ ಬಸ್ ನಿಲ್ಲದೆ ಮುಂದುವರಿದಾಗ ಕುಪಿತಗೊಂಡ ಆತ ಬಸ್ ಗೆ
ಕಲ್ಲೆಸೆದಿದ್ದು, ಇದರಿಂದಾಗಿ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನಲಾಗಿದೆ.
ಕಲ್ಲೆಸೆದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.