ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆದಿಲ ಗ್ರಾಮದ ವತಿಯಿಂದ ‘ತುಡರ್ ಉತ್ಸವ’ವು ಅ.24 ರಂದು ಶ್ರೀರಾಮ ಭಜನಾ ಮಂದಿರ ಸಕೇತನಗರದಲ್ಲಿ ನಡೆಯಿತು.
ಭಜನೆ ಪ್ರಾರಂಭಿಸಿ ರಾಮಜ್ಯೋತಿ (ತುಡರ್) ಹಿಡಿದು ಭಜನೆ ಮಾಡುತ್ತಾ ಬಡೆಕ್ಕಿಲ ಕಾಲೊನಿಗೆ ನಡೆದು, ಅಲ್ಲಿ ಪ್ರತಿ ಮನೆಗಳಿಗೂ ತೆರಳಿ ರಾಮಜ್ಯೋತಿಯಿಂದ ಮನೆಯೊಳಗೆ ದೀಪ ಬೆಳಗಿಸಲಾಯಿತು. ಬೆಳ್ತ ಅವರ ಮನೆಯಲ್ಲಿ ಸಮಾಪನಗೊಂಡು ಸಭಾಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಮುಖರಾದ ಭರಣೀಕೆರೆ ಸುಬ್ರಹ್ಮಣ್ಯ ಭಟ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿವರಾಮ ಭಟ್ ವಳಂಗಜೆ ಉಪಸ್ಥಿತರಿದ್ದರು. ಬೆಳ್ತ ಅವರ ಜೀವನ ಸಾಧನೆಯನ್ನು ಹಿರಿಯ ಸ್ವಯಂಸೇವಕರಾದ ಪದ್ಮನಾಭ ಗೌಡ ವಾಲ್ತಾಜೆ ರವರು ಗೌರವ ಭಾಷಣ ನಡೆಸಿಕೊಟ್ಟರು.
ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ ಬ.ಗಣರಾಜ ಭಟ್ ಕೆದಿಲ, ಬಾ.ಜ.ಪ ಅಧ್ಯಕ್ಷ ಪದ್ಮನಾಭ ಭಟ್, ನಿವೃತ್ತ ಸೈನಿಕರಾದ ಸುನಿಲ್ ಕುಲಾಲ್ ಕಾಂಜಳಿಕೆ, ಸ್ವಯಂಸೇವಕರಾದ ಸುಬ್ರಹ್ಮಣ್ಯ ಭಟ್ ಬೀಟಿಗೆ, ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೆದಿಲ, ಸಮಾಜ ಸೇವಕರಾದ ಗೋಪಾಲ ಕೃಷ್ಣ ಭಟ್ ವಳಂಗಜೆ, ಶ್ರೀರಾಮ ಮಂದಿರದ ಕಾರ್ಯಕರ್ತ ಅಶ್ವತ್ ಕಾಂತುಕೋಡಿ, ಕರಿಮಜಲು ಶ್ರೀ ಕೃಷ್ಣ ಮಂದಿರದ ಕಾರ್ಯಕರ್ತ ಶ್ರೀನಿವಾಸ ಕರಿಮಜಲು ಹಾಗೂ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು. ನೂರಕ್ಕೂ ಅಧಿಕ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕು ಸಂಘಚಾಲಕರಾದ ಸುಬ್ರಹ್ಮಣ್ಯ ಭಟ್ ಬಡೆಕ್ಕಿಲ ಕಾರ್ಯಕ್ರಮ ನಿರೂಪಣೆ ನಡೆಸಿದರು.