ಜಿಲ್ಲೆಯ ಜನಪ್ರತಿನಿಧಿಗಳಿಗೆ ದಕ್ಷ ಪ್ರಾಮಾಣಿಕ ಜನಪರ ಇರುವ ಅಧಿಕಾರಿಗಳು ಬೇಡ,ಅವರಿಗೆ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಭ್ರಷ್ಟ ಅಧಿಕಾರಿಗಳು ಬೇಕು ಈ ಕಾರಣಕ್ಕಾಗಿ ದಕ್ಷ ಅಧಿಕಾರಿಗಳಾದ ಜಿಲ್ಲಾಧಿಕಾರಿ ಡಾ ರಾಜೇಂದ್ರ ರವರ ವರ್ಗಾವಣೆ ಆಗಿದೆ, ಇದರಿಂದ ಭ್ರಷ್ಟ ರಾಜಕಾರಣಿಗಳಿಗೆ ಖುಷಿ ತಂದಿರಬಹುದು., ಆದರೆ ಜಿಲ್ಲೆಯ ಜನತೆಗೆ ತುಂಬಾ ಬೇಸರ ತಂದಿದೆ ಎಂದು ಪುತ್ತೂರು ನಗರ ಸಭೆಯ ಮಾಜಿ ವಿಪಕ್ಷ ನಾಯಕ ಎಚ್ ಮಹಮ್ಮದ್ ಅಲಿ ಹೇಳಿದರು.
ದ ಕ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಯವರು ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಾಗಿದ್ದಾರೆ. ಅವರನ್ನು ಪುತ್ತೂರು ಸಹಾಯಕ ಕಮಿಷನರ್ ಅದಲ್ಲಿಂದ ನೋಡುತ್ತಿದ್ದೇನೆ, ಅವರು ತನ್ನ ಕರ್ತವ್ಯದಲ್ಲಿ ಬದ್ಧತೆ ಇಟ್ಟುಕೊಂಡಿದ್ದರು ಮತ್ತು ದ.ಕ ಜಿಲ್ಲಾಧಿಕಾರಿಗಳಾಗಿ ಜಿಲ್ಲೆಯ ಸರ್ವಾ0ಗಿನ ಅಭಿವೃದ್ಧಿಯ ಕನಸು ಹೊತ್ತುಕೊಂಡಿದ್ದರು, ತಾನೋರ್ವ ವೈದ್ಯನಾಗಿರುವ ಡಾ. ರಾಜೇಂದ್ರ ರವರು ಕೊರೋನಾ ಸಾಂಕ್ರಾಂಮಿಕ ಸಂದರ್ಭದಲ್ಲಿ ತನಗೆ ಕೊರೋನಾ ಸೋಂಕು ತಗುಲಿದರು, ಲೆಕ್ಕಿಸದೆ ಜಿಲ್ಲೆಯ ಜನರಿಗೆ ಯಾವುದೇ ಕಿರುಕುಳ ತೊಂದರೆ ಆಗದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.
ನನ್ನ 35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಹಲವಾರು ಕೆಎಎಸ್ ಹಾಗೂ ಐಎಎಸ್ ಅಧಿಕಾರಿಗಳನ್ನು ಹತ್ತಿರದಿಂದ ಕಂಡಿದ್ದೇನೆ, ಇವರಲ್ಲಿ ತುಂಬಾ ಒಳ್ಳೇಯ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬಂದು ಹೋಗಿದ್ದಾರೆ. ಆದರೆ ನಾನು ತುಂಬಾ ಇಷ್ಟ ಪಟ್ಟಂತ ಅಧಿಕಾರಿಗಳಲ್ಲಿ ಒಬ್ಬರೇ ಒಬ್ಬರು ಅದು ಡಾ. ರಾಜೇಂದ್ರ ರವರು, ಯಾಕೆಂದರೆ ರಾಜೇಂದ್ರ ರವರಲ್ಲಿ ಮಾನವೀಯತೆಯ ಗುಣವಿತ್ತು ಹಾಗೂ ಅವರು ಜನರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು, ಖಡಕ್ ಅಧಿಕಾರಿಯಾಗಿರುವ ರಾಜೇಂದ್ರ ರವರಿಗೆ ಭ್ರಷ್ಟಾಚಾರಿಗಳನ್ನು ಕಂಡರೆ ಆಗುತ್ತಿರಲಿಲ್ಲ, ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದರು.
ದ.ಕ ಜಿಲ್ಲೆಯ ಜನರನ್ನು ತುಂಬಾ ಇಷ್ಟ ಪಡುತ್ತಿದ್ದ ಅಧಿಕಾರಿಯಾಗಿದ್ದರು ಅವರು ಜಿಲ್ಲೆಯ ಜನರಿಗೆ ಇಲಾಖೆಯ ಕಾನೂನಿಂದ ಆಗುತ್ತಿರುವ ತೊಡಕುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದರು. ಜಿಲ್ಲೆಯ ಮರಳು ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕು ಇದರಿಂದ ಜನರಿಗೆ ಕಡಿಮೆ ದರದಲ್ಲಿ ಮರಳು ಸಿಗಬೇಕು ಅದಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಬೇಕೆಂಬ ಇರಾದೆ ಅವರಲ್ಲಿತ್ತು. ಆದರೆ ಮರಳು ಮಾಫಿಯಾಗಳ ಕೈಗೊಂಬೆಯಾಗಿರುವ ಜನಪ್ರತಿನಿಧಿಗಳ ನಿರಂತರ ಹಸ್ತ ಕ್ಷೇಪದಿಂದ ಜಿಲ್ಲಾಧಿಕಾರಿಗಳ ಈ ಕನಸು ನನಸಾಗಲಿಲ್ಲ ಹಾಗೂ ಜನಪ್ರತಿಧಿಗಳ ನಿರಂತರ ಹಸ್ತಕ್ಷೇಪದಿಂದ ಜಿಲ್ಲಾ ಆಡಳಿತದಲ್ಲಿ ನಿರೀಕ್ಷಿತ ಸುಧಾರಣೆ ತರಲು ಜಿಲ್ಲಾಧಿಕಾರಿಗಳಿಗೆ ಸಾಧ್ಯವಿಲ್ಲವಾಯಿತು ಎಂದು ಹೇಳಿದ ಅಲಿಯವರು ಭ್ರಷ್ಟ ರಾಜಕಾರಣಿಗಳಿಗೆ ಅವರ ಜನಪರ ಆಡಳಿತ ಇಷ್ಟ ಆಗದಿದ್ದರು, ನಮ್ಮ ಜಿಲ್ಲೆಯ ಜನತೆಗೆ ಅವರ ಸೇವೆಯ ಅಗತ್ಯತೆ ಇತ್ತು, ಇವರ ವರ್ಗಾವಣೆಯಿಂದ ಜಿಲ್ಲೆಯ ಜನತೆಗೆ ನಷ್ಟ ಎಂದು ಆರೋಪಿಸಿದರು.