ಪುತ್ತೂರು: ದಿನ ಕಳೆದ ಆಹಾರ ಮತ್ತು ಹುಳವಿದ್ದ ಆಹಾರೋತ್ಪನ್ನವನ್ನು ಮಾರಾಟ ಮಾಡುತ್ತಿದ್ದ ಬೇಕರಿಗೆ ನಗರಸಭೆಯ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಅ.25 ರಂದು ದರ್ಬೆಯ ಮೊಯಿದಿನ್ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ದರ್ಬೆಯ ಮೊಯಿದಿನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ನ್ಯೂ ಬೆಂಗಳೂರು ಅಯ್ಯಂಗಾರ್ ಬೇಕರಿಗೆ ನಗರಸಭೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬೇಕರಿಯಲ್ಲಿ ದಿನ ಕಳೆದ ಆಹಾರ ಮತ್ತು ಹುಳವಿದ್ದ ಆಹಾರೋತ್ಪನ್ನ ಕಂಡು ಬಂದಿದೆ.

ಕಾರ್ಯಚರಣೆಯಲ್ಲಿ ನಗರಸಭಾ ಹಿರಿಯ ಆರೋಗ್ಯಾಧಿಕಾರಿ ರಾಮಚಂದ್ರ, ವರಲಕ್ಷ್ಮಿ, ಶ್ವೇತಾ ಕಿರಣ್, ಸ್ಯಾನಿಟರಿ ಸೂಪರ್ವೈಸರ್ ಅಮಿತ್, ಐತಪ್ಪ, ವಾಹನ ಚಾಲಕ ರಾಧಾಕೃಷ್ಣ ಪಾಲ್ಗೊಂಡಿದ್ದರು.
ಕಾರ್ಯಚರಣೆ ನಡೆಸಿದ ವರದಿಯನ್ನು ಆರೋಗ್ಯಾಧಿಕಾರಿಗಳು ಟಿ.ಎಚ್. ಒ ದೀಪಕ್ ರೈ ರವರಿಗೆ ಕಳುಹಿಸಿಕೊಟ್ಟಿದ್ದು, ಪರಿಶೀಲಿಸಿದ ಬಳಿಕ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.




























