ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಕಲ್ಲುರ್ಟಿ ದೈವದ ಕಟ್ಟೆ ಇದ್ದ ಸ್ಥಳದಲ್ಲಿ ಅನ್ಯಮತೀಯರು ದಫನ ಭೂಮಿ ಮಾಡುವ ಉದ್ದೇಶದಿಂದ ನಿರಪೇಕ್ಷಣಾ ಪತ್ರಕ್ಕಾಗಿ ಅರ್ಜಿ ಹಾಕಿದ್ದು, ನಿರಪೇಕ್ಷಣಾ ಪತ್ರ ನೀಡದಂತೆ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ವತಿಯಿಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನೆಟ್ಟಣಿಗೆ ಮುಡ್ನೂರು ಪಡುವನ್ನೂರು ಗ್ರಾಮದ ಗಡಿಭಾಗಗದಲ್ಲಿರುವ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯಕ್ಕೆ ಸಂಬಂಧಿಸಿದ ಕಲ್ಲುರ್ಟಿ ಬದಿ, ಕಲ್ಲುರ್ಟಿ ದೈವದ ಕಟ್ಟೆ ಇದ್ದ ಸ್ಥಳವಾಗಿದ್ದು, ಪಂಚಲಿಂಗೇಶ್ವರ ದೇವರು ಈಶ್ವರಮಂಗಲ ಜಾತ್ರೆಯ ಸಂದರ್ಭದಲ್ಲಿ ಕುತ್ಯಾಳ ಮಹಾವಿಷ್ಣು ದೇವಸ್ಥಾನಕ್ಕೆ ತೆರಳುವ ವೇಳೆ ಅಲ್ಲಿಂದ ಕಲ್ಲುರ್ಟಿ ದೈವ ಕುತ್ಯಾಳಕ್ಕೆ ತೆರಳಿ ಅಲ್ಲಿಂದ ನಂತರ ತಿರುಗಿ ಅದೇ ಸ್ಥಳಕ್ಕೆ ಬಂದು ಅಲ್ಲಿ ಸಮಾಪ್ತಿಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ ಇದು ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯಲ್ಲಿ ಕೂಡ ಕಂಡು ಬಂದಿದೆ.
ಈ ಜಾಗ ಸರಕಾರಿ ಜಾಗವಾಗಿದ್ದು, ಅನ್ಯಮತೀಯರು ದಫನ ಭೂಮಿ ಮಾಡುವ ಉದ್ದೇಶದಿಂದ ಈಗಾಗಲೇ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗೆ ನಿರಪೇಕ್ಷಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ನಿರಪೇಕ್ಷಾಣಾ ಪತ್ರ ನೀಡದಂತೆ., ಒಂದು ವೇಳೆ ನೀಡಿದರೆ ಅದರ ವಿರುದ್ಧ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ಪತ್ರ ತಿಳಿಸಲಾಗಿದೆ.
ಈ ವೇಳೆ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ಅಧ್ಯಕ್ಷ ಪ್ರಜ್ವಲ್ ಮಡ್ಯಲಮಜಲು, ಹಿಂದೂ ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರಮಂಗಲ, ಪ್ರದೀಪ್ ರೈ ಮೈರೋಳು, ಹರೀಶ್, ಬಾಬು ಈಶ್ವರಮಂಗಲ, ಪವನ್ ಬಾಣಪದವು,ಚರಣ್ ಮಡ್ಯಲಮಜಲು, ಪ್ರವೀಣ್ ಕಕ್ಕಪ್ಪಾಡಿ ಮತ್ತಿತರು ಉಪಸ್ಥಿತರಿದ್ದರು.




























