ಮಂಗಳೂರು: ಮೀನು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ಉಚ್ಚಿಲದಲ್ಲಿ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಮೀನು ಸಾಗಾಟದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಉಚ್ಚಿಲ ಸಮೀಪ ಪಲ್ಟಿಯಾಗಿದೆ.

ಘಟನೆಯಿಂದಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಲಾರಿ ಪಲ್ಟಿಯಾದ ಹಿನ್ನೆಲೆ ರಸ್ತೆಯಲ್ಲೆಲ್ಲಾ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಜನ ಜಮಾವಣೆಗೊಂಡಿದ್ದಾರೆ.





























