ಪುತ್ತೂರು: ಆಟೋ ಚಾಲಕನೋರ್ವ ಕಂಠಪೂರ್ತಿ ಕುಡಿದು ಮುಖ್ಯ ರಸ್ತೆ ಬದಿ ಆಟೋ ರಿಕ್ಷಾ ಪಾರ್ಕ್ ಮಾಡಿ ಅದರಲ್ಲಿಯೇ ಮಲಗಿದ್ದು, ಈ ಹಿನ್ನೆಲೆ ಆತನನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆಯಲ್ಲಿ ನಡೆದಿದೆ.

ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಮುಖ್ಯ ರಸ್ತೆ ಬದಿಯ ಪಾರ್ಕಿಂಗ್ ನಲ್ಲಿ ಆಟೋ ಚಾಲಕನೋರ್ವ ಕಂಠಪೂರ್ತಿ ಕುಡಿದು ಆಟೋ ರಿಕ್ಷಾದಲ್ಲಿ ಮಲಗಿದ್ದು, ಸುಮಾರು ಒಂದು ಗಂಟೆಯ ವರೆಗೂ ವ್ಯಕ್ತಿ ಮಲಗಿದಾಗೆಯೇ ಇದ್ದ ಹಿನ್ನೆಲೆ ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಗೆ ಏನೋ ಅಪಾಯ ಸಂಭವಿಸಿದೆ ಎಂದು ಯೋಚಿಸಿ, ಸಂಚಾರಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಚಾಲಕ ಕುಡಿದು ಆಟೋ ರಿಕ್ಷಾ ಚಾಲನೆ ಮಾಡಿದ ಹಿನ್ನೆಲೆ ಸಂಚಾರಿ ಠಾಣಾ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದು, ಆಟೋ ರಿಕ್ಷಾವನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.



























