ಬಂಟ್ವಾಳ: ಬಾಲಕಿಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ ಆರೋಪದ ಮೇಲೆ ಕಲ್ಲಡ್ಕದ ನಿವಾಸಿಯೋರ್ವನನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ.
ಕಲ್ಲಡ್ಕ ನಿವಾಸಿ ಸಮೀರ್(33) ಬಂಧಿತ ಆರೋಪಿ.

ಮಾಣಿ ಸಮೀಪದ ಬುಡೋಳಿಯಲ್ಲಿರುವ ದಿನಸಿ ಅಂಗಡಿಯೋಂದರಲ್ಲಿ ಕೆಲಸ ಮಾಡುತ್ತಿದ್ದ ಕಲ್ಲಡ್ಕ ನಿವಾಸಿ ಸಮೀರ್ ಅಪ್ರಾಪ್ತ ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೆಮೊರಿ ಕಾರ್ಡ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ..

























