ಮಂಗಳೂರು: ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ಪೋಸ್ಟ್ ಹಾಕಿದ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿರುವ ಅಡ್ಯಾರ್ ಪದವು ನಿವಾಸಿ ಕೆ.ಆರ್. ಶೆಟ್ಟಿ ವಕೀಲರ ಮೂಲಕ ಕೋರ್ಟಿಗೆ ಹಾಜರಾಗಿದ್ದು, ಆತನನ್ನು ನ್ಯಾಯಾಲಯ ಒಂದು ದಿನ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಕೆ.ಆರ್. ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ಗೆ ಇನ್ನೋರ್ವ ಆರೋಪಿ ಕಮೆಂಟ್ ಹಾಕಿದ್ದು, ಆತ ತಲೆಮರೆಸಿಕೊಂಡಿದ್ದಾನೆ. 4 ತಂಡಗಳನ್ನು ರಚಿಸಿ ಆತನಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

























