ಪಡಂಗಡಿ: ಗ್ರಾಮದ ಕಾರ್ಯಾಣ ನಿವಾಸಿ, ಪ್ರಸ್ತುತ ತೆಂಕಕಾರಂದೂರುವಿನಲ್ಲಿ ನೆಲೆಸಿರುವ ಪ್ರಸಿದ್ದ ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ ಅಲ್ಪಕಾಲದ ಅಸೌಖ್ಯದಿಂದ ಇಂದು (ಅ.28) ಬೆಳಗ್ಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಹಲವಾರು ವರ್ಷಗಳಿಂದ ಭಜನೆ,ಸಂಗೀತ,ಭಕ್ತಿ ರಸಮಂಜರಿ ಮುಖೇನಾ ಹಲವಾರು ವೇದಿಕೆಗಳಲ್ಲಿ ಹಾಡಿ ಜನರನ್ನು ರಂಜಿಸಿ, ಗುರುತಿಸಿಕೊಂಡಿದ್ದರು.
ಸ್ವಾತಿ ಮ್ಯೂಸಿಕಲ್ ಬೆಳ್ತಂಗಡಿ ಇದರ ಸಂಚಾಲಕರಾಗಿ, ನಮ ಮಾತೆರ್ಲ ಒಂಜೇ ಕಲಾತಂಡದ ಆಧಾರ ಸ್ತಂಭವಾಗಿ, ಅನೇಕ ಕಲಾವಿದರಿಗೆ ಬೆಳಕಾಗಿ ಕಲಾವಿದರನ್ನು ಬೆಳೆಸಿ ಕಲೆಗಾಗಿಯೆ ತನ್ನ ಜೀವನವನ್ನು ಸವೆಸಿದ್ದರು.
ಮೃತರು ಪತ್ನಿ ಶರ್ಮೀಳಾ ಶೆಟ್ಟಿ, ಪುತ್ರ ಜೀವನ್ ಶೆಟ್ಟಿ, ಪುತ್ರಿ ಜೀವಿತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.


























