ವೇಣೂರು: ಜಾಂಡೀಸ್ ಜ್ವರದಿಂದ ಬಳಲುತ್ತಿದ್ದ ಪಡ್ಡಂದಡ್ಕ ಕಜೆಮನೆ ನಿವಾಸಿ ಕಿಶೋರ್ ಆಚಾರ್ಯ (22) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೃಷ್ಣಯ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರ ಕಿಶೋರ್ ಆಚಾರ್ಯ ಅವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಿದ್ದರು. ಆದರೆ ಅ.26 ರಂದು ಜ್ವರ ಮತ್ತೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಾಂಡೀಸ್ ಎಂದು ಖಚಿತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಅಂಗಾಂಗ ವೈಫಲ್ಯಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕಿಶೋರ್ ವೇಣೂರು ಪಾರ್ಶ್ವನಾಥ ಪ್ರಿಂಟರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಂದೆ, ತಾಯಿ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

























