ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರು ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯ ವರದಿ ಶುದ್ಧ ಸುಳ್ಳು, 2018 ನೇ ಇಸವಿಯಲ್ಲಿ ಬಿಡುಗಡೆಯಾದ ಸುದ್ದಿಯನ್ನು ಇದೀಗ ವೈರಲ್ ಮಾಡಲಾಗುತ್ತಿದೆ., ಇದು ಕೆಲವು ಕಿಡಿಗೇಡಿಗಳ ಕೃತ್ಯ ಎಂದು ಪುತ್ತೂರಿನ ಕಾಂಗ್ರೆಸ್ ಮೂಲ ಸ್ಪಷ್ಟಪಡಿಸಿದೆ.
ಮೊನ್ನೆ ನಡೆದ ಕಬಕ – ವಿಟ್ಲ ರಸ್ತೆ ದುರಸ್ಥಿಯ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ,ಖಂಡಿತ ಗೆಲ್ಲುತ್ತೇನೆ ಎಂದು ಶಕುಂತಲಾ ಶೆಟ್ಟಿಯವರು ಘೋಷಿಸಿದ್ದರು. ಇದಾದ ಬಳಿಕ ಕೆಲವು ಕಿಡಿಗೇಡಿಗಳು ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯ ಸುದ್ದಿ ವೈರಲ್ ಮಾಡುತ್ತಿದ್ದಾರೆ.
ಇದು ಶುದ್ಧ ಸುಳ್ಳು, ಈ ವರದಿಯು 2018 ನೇ ಇಸವಿಯ ಉದಯವಾಣಿ ವೆಬ್ ನ್ಯೂಸ್ ವರದಿ ಆಗಿರುತ್ತದೆ., ಅವತ್ತಿನ ಸುದ್ದಿಯನ್ನು ಈಗ ವೈರಲ್ ಮಾಡಿ ಅಪಪ್ರಚಾರ ಮಾಡುಲಾಗುತ್ತಿದೆ., ಶಕುಂತಲಾ ಟಿ ಶೆಟ್ಟಿ ಮುಂದಿನ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು , ಚುನಾವಣೆಗೆ ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲವು ತಿಳಿಸಿದೆ.



























