ನವದೆಹಲಿ: ಸೋಷಿಯಲ್ ಮೀಡಿಯಾ.. ಎರಡು ಮಗ್ಗಲಿರುವ ಒಂದೇ ನಾಣ್ಯ ಅಂದ್ರು ತಪ್ಪಾಗೋದಿಲ್ಲ.. ಯಾಕಂದ್ರೆ, ಇದು ಪ್ರಮುಖ ಮಾಹಿತಿಯನ್ನು ನೀಡುವುದು ಮಾತ್ರವಲ್ಲದೆ ತಪ್ಪು ಮಾಹಿತಿಯನ್ನು ಹರಡುತ್ತೆ. ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದೀಗ, ‘2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ’ಗೆ ತಿದ್ದುಪಡಿ ತರುವ ಮೂಲಕ ಮತ್ತಷ್ಟು ಹದ್ದಿನ ಕಣ್ಣಿಡಲು ಮುಂದಾಗಿದೆ.
ಶೀಘ್ರದಲ್ಲೇ ದೂರು ಮೇಲ್ಮನವಿ ಸಮಿತಿ ರಚನೆ..
ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ತಿದ್ದುಪಡಿ ನಿಯಮ 2022ಅನ್ನು ಬಿಡುಗಡೆ ಮಾಡಿದೆ. ಗೆಜೆಟ್ ಅಧಿಸೂಚನೆಯ ಪ್ರಕಾರ, ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ಮೇಲ್ಮನವಿ ಸಮಿತಿಗಳನ್ನು 3 ತಿಂಗಳೊಳಗೆ ರಚಿಸಲು ಸೂಚಿಸಿದೆ.
ಕುಂದುಕೊರತೆ ಮೇಲ್ಮನವಿ ಸಮಿತಿ ಕಾರ್ಯವೇನು..!!??
ಲೈಂಗಿಕ ದೌರ್ಜನ್ಯದ ವಿಚಾರಗಳು, ತಪ್ಪು ಮಾಹಿತಿಗಳು, ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆ ತರುವಂಥ ಸಂದೇಶ ಸೇರಿದಂತೆ ಇತ್ಯಾದಿ ದೂರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಪರಿಹರಿಸಬೇಕು. ಇದರಿಂದ ದೊರೆತ ಪರಿಹಾರದ ಬಗ್ಗೆ ಬಳಕೆದಾರರಿಗೆ ಅಸಮಾಧಾನವಿದ್ದಲ್ಲಿ, ಕುಂದುಕೊರತೆ ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಮೇಲ್ಮನವಿ ಸಮಿತಿ ದೂರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದು, ಮೇಲ್ಮನವಿ ದೂರುಗಳನ್ನು 30 ದಿನಗಳಲ್ಲಿ ಇತ್ಯರ್ಥ ಪಡಿಸಬೇಕು. ಈ ಸಮಿತಿ ನೀಡುವ ತೀರ್ಪಿಗೆ ಸಾಮಾಜಿಕ ಮಾಧ್ಯಮ ಕಂಪನಿಗಳು, ಮಧ್ಯವರ್ತಿಗಳು ಹಾಗೂ ಬಳಕೆದಾರರು ಬದ್ಧರಾಗಿರಬೇಕು ಎಂದು ತಿಳಿಸಿದೆ.
ಸರ್ಕಾರದ ಹೊಸ ನಿಯಮದಿಂದ ಭಾರತದ ಸೋಷಿಯಲ್ ಮೀಡಿಯಾ ಬಳಕೆದಾರರ ಹಕ್ಕಿಗೆ ಧಕ್ಕೆ ಆಗಲಿದೆ ಎಂದು ಇಂಟರ್ ನೆಟ್ ಫ್ರೀಡಂ ಫೌಂಡೇಶನ್ ವಿರೋಧ ವ್ಯಕ್ತಪಡಿಸಿದೆ. ಹಾಗೂ ಈ ಮೇಲ್ಮನವಿ ಸಮಿತಿಯು ಸರ್ಕಾರದ ಸೆನ್ಸಾರ್ ಷಿಪ್ ಕೆಲಸ ಮಾಡಲಿದೆ ಎಂದು ಟೀಕಿಸಿದೆ.
ಮೂವರು ಸದಸ್ಯರನ್ನೊಳಗೊಂಡ ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ. ಇದರಿಂದ ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಗೆ ಯಾವ ರೀತಿ ರಕ್ಷಣೆ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..
New amended IT rules are next step to realizing our govts duty to #DigitalNagriks of Open, Safe&Trusted, Accountable Internet
— Rajeev Chandrasekhar 🇮🇳 (@Rajeev_GoI) October 28, 2022
Also marks a new partnership btwn Govt and Intermediaries in making n keeping our Internet safe & trusted for all Indians.#IndiaTechade #OSTA pic.twitter.com/COQhGOHv5D
Empowering users.
— Ashwini Vaishnaw (@AshwiniVaishnaw) October 28, 2022
Grievance Appellate Committee (GAC) has been introduced for hearing appeals against decisions of Grievance Officer appointed by the intermediary.#IntermediaryGuidelinesAmendment


























