ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಗ್ನಿಪಥ್ ಸೇನಾ ನೇಮಕಾತಿಗೆ ತರಬೇತಿ ನೀಡಿದ್ದು, ಮೊದಲ ಹಂತದ ದೈಹಿಕ ಸದೃಢತೆ ಪರೀಕ್ಷೆ ಉತ್ತೀರ್ಣರಾದವರಿಗೆ ಅಂತಿಮ ಹಂತದ ಲಿಖಿತ ಪರೀಕ್ಷೆಯ ತಯಾರಿಗೆ ಉಚಿತ ತರಬೇತಿಯನ್ನು ನೀಡಿತ್ತು.
ಮೊದಲ ದೈಹಿಕ ಸದೃಢತೆ ಪರೀಕ್ಷೆ ಹಾಸನದಲ್ಲಿ ನಡೆದಿದ್ದು, ಅದರಲ್ಲಿ ಉತ್ತೀರ್ಣರಾಗಿದ್ದ ವಿವೇಕಾನಂದ ಕಾಲೇಜಿನಲ್ಲಿ 3 ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವೈಭವ್ ನಾಣಯ್ಯ .ಬಿ.ಪಿ ರವರು ಕೊಡಗಿನವರಾಗಿದ್ದು ನಿವೃತ್ತ ಯೋಧ ಬಿ.ಎ .ಪ್ರಕಾಶ್ ರವರ ಪುತ್ರ.
ಇವರು ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದ ನಡುವೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಮಾರ್ಗದರ್ಶನ ಪಡೆದುಕೊಂಡು ಕಳೆದ ಒಂದು ತಿಂಗಳಿನಿಂದ ಲಿಖಿತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಹಾವೇರಿಯಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರುವ 10 ವಿಧ್ಯಾರ್ಥಿಗಳು ನ.13 ರಂದು ನಡೆಯಲಿರುವ ಪರೀಕ್ಷೆಗೆ ಪೂರ್ವ ತಯಾರಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸಂತಸ ವ್ಯಕ್ತ ಪಡಿಸಿದ್ದು” ನಮ್ಮ 2 ವರ್ಷಗಳ ಸತತ ಪ್ರಯತ್ನಕ್ಕೆ ಈಗ ಫಲಿತಾಂಶ ಬರಲು ಪ್ರಾರಂಭವಾಗಿದ್ದು. ಪ್ರಸ್ತುತ ಅಗ್ನಿಪಥ್ ಯೋಜನೆಯ ಪ್ರಥಮ ವರ್ಷದಲ್ಲೇ ನಮ್ಮಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿ ವೈಭವ್ ಆಯ್ಕೆಯಾಗಿದ್ದು ಸಂತಸ ತಂದಿದೆ, ಇನ್ನಷ್ಟು ವಿದ್ಯಾರ್ಥಿಗಳು ನಮ್ಮ ಭಾಗದಿಂದ ಆಯ್ಕೆಯಾಗಲು ಇದು ಮಾದರಿಯಾಗಲಿ” ಎಂದು ಶುಭ ಹಾರೈಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ಮತ್ತು ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ, ಪುತ್ತೂರು. ಮೊಬೈಲ್ ಸಂಖ್ಯೆ 9620468869/ 9148935808 ನ್ನು ಸಂಪರ್ಕಿಸಬಹುದು.


























