ಉಳ್ಳಾಲ: ಮಸೀದಿಯೊಂದಕ್ಕೆ ನುಗ್ಗಿದ ಕಳ್ಳರು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಮಸೀದಿಯನ್ನು ದೋಚುವ ಮುನ್ನ ಅಥವಾ ನಂತರ ಕಳ್ಳರು ಶಾಲೆಯೊಳಗಡೆ ಕುಳಿತು ಪಾರ್ಟಿ ಮಾಡಿರುವ ಸೊತ್ತುಗಳು ಪತ್ತೆಯಾಗಿದೆ. ಮುಖಗವಚ, ಚಿಕನ್ ಟಿಕ್ಕಾ ಮಾಡುವ ಯಂತ್ರ, ಉಪ್ಪು ಹುಡಿ, ಖಾರದ ಹುಡಿ, ಗ್ಯಾಸ್ ಲೈಟರ್ ಎಲ್ಲವೂ ಶಾಲೆಯ ವಠಾರದಲ್ಲಿ ಕಂಡು ಬಂದಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.