ಪುತ್ತೂರು: ಬೈಪಾಸ್ ರಸ್ತೆ ಬಪ್ಪಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಸಂಕೀರ್ಣವೊಂದರ ಕೊಳಚೆ ನೀರು ಮಳೆನೀರು ಹೋಗುವ ಚರಂಡಿಗೆ ಬಿಡುತ್ತಿದ್ದು, ಈ ಹಿನ್ನೆಲೆ ಕೊಳಚೆ ನೀರು ವಠಾರದ ಬಳಿ ಬರುತ್ತಿದ್ದು, ಇದರಿಂದಾಗಿ ಪರಿಸರವಿಡಿ ದುರ್ವಾಸನೆ ಬರುತ್ತಿದ್ದು, ಸೊಳ್ಳೆಗಳ ಕಾಟದಿಂದ ಆವೃತ್ತವಾಗಿದೆ ಈ ಹಿನ್ನೆಲೆ ನಾವು ಸಂಕಷ್ಟ ಪಡುವಂತಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ನಗರ ಸಭೆಗೆ ದೂರು ನೀಡಿದ ಘಟನೆ ನಡೆದಿದೆ.
ದೂರು ನೀಡದ ಕೂಡಲೇ ಕಾರ್ಯ ಪ್ರವೃತ್ತರಾದ ನಗರಸಭಾ ಕಾರ್ಯಾಲಯವು ವಾಣಿಜ್ಯ ಸಂಕೀರ್ಣದ ಮಾಲಕರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಾಣಿಜ್ಯ ಸಂಕೀರ್ಣದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಮಳೆ ನೀರಿನ ಚರಂಡಿಗೆ ಬಿಡುತ್ತಿರುವುದನ್ನು ಸ್ಥಗಿತಗೊಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ, ಕೈಗೊಂಡ ಕ್ರಮದ ಬಗ್ಗೆ ಲಿಖಿತ ವರದಿ ನೀಡಲು ಕಛೇರಿಯಿಂದ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ನೀವು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ವಿಚಾರಣಾ ನೋಟಿಸ್ ನೀಡಿ ತ್ಯಾಜ್ಯ ನೀರಿನ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿತ್ತು. ವಾಣಿಜ್ಯ ಸಂಕೀರ್ಣವೊಂದರ ಕೊಳಚೆ ನೀರು ಮಳೆನೀರು ಹೋಗುವ ಚರಂಡಿಗೆ ಬಿಡುತ್ತಿದ್ದು, ಈ ಹಿನ್ನೆಲೆ ಕೊಳಚೆ ನೀರು ವಠಾರದ ಬಳಿ ಬರುತ್ತಿದ್ದು, ಆದುದರಿಂದ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ನೋಟೀಸ್ ತಲುಪಿದ ತಕ್ಷಣ ತ್ಯಾಜ್ಯ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಿಬೇಕಾಗಿ ನಗರಸಭಾ ನೋಟಿಸ್ ನಲ್ಲಿ ತಿಳಿಸಲಾಗಿದೆ.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಕೌನ್ಸಿಲರ್ ಅಶೋಕ್ ಶೆಣೈ ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ್ದು, ಹೆಲ್ತ್ ಇನ್ಸ್ಪೆಕ್ಟರ್ ವರಲಕ್ಷ್ಮಿ, ಸಿಎಂಸಿ ಸ್ಟಾಫ್ ಪುರುಷೋತ್ತಮ್ ಮತ್ತು ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ..



























