ಪುತ್ತೂರು : ಕ್ರಿಕೆಟ್ ಆಟಗಾರರ ಸಂಖ್ಯೆ ಎಲ್ಲಾ ಕಡೆ ಹೆಚ್ಚಾಗಿಯೇ ಇದೆ ಅದರಲ್ಲೂ ಪುತ್ತೂರಿನಲ್ಲಿ ಕ್ರಿಕೆಟ್ ಆಟಗಾರರ, ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಕಡಿಮೆಯೇನಿಲ್ಲ. ಆದರೇ ತಾಲೂಕಿನಲ್ಲಿ ಕ್ರೀಡಾಂಗಣದ ಕೊರತೆ ಕ್ರಿಕೆಟ್ ಆಟಗಾರರ ಬಹುದೊಡ್ಡ ಸಮಸ್ಯೆ ಹಾಗೂ ಬೇಡಿಕೆಯಾಗಿತ್ತು.
ಇದೀಗ ಆಟಗಾರರ ಬಹುದೊಡ್ಡ ಕನಸಿಗೆ ಸಂಪುಟ ಸಭೆಯಲ್ಲಿ ಅಂಗೀಕಾರ ದೊರಕಿದೆ.
ಪುತ್ತೂರಿನ ಶಾಸಕ ಸಂಜೀವ ಮಠಂದೂರು ರವರು ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮೇರೆಗೆ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು 23.25 ಎಕ್ರೆ ಜಮೀನನ್ನು ಕೆ.ಎಸ್.ಸಿ.ಎ ಗೆ ನೀಡಲು ಅನುಮೋದನೆ ದೊರಕಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಇದರಿಂದಾಗಿ ಪುತ್ತೂರಿನ ಕ್ರಿಕೆಟ್ ಆಟಗಾರರಲ್ಲಿ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮನೆಮಾಡಿದೆ.