ವಿಟ್ಲ ವ್ಯವಸಾಯ ಸೇವಾ ಸಹಕಾರ ಸಂಘ ದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅ.31 ರಂದು ನಿವೃತ್ತಿ ಹೊಂದಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಲಾ ಕೆ ಪಿ ರವರಿಗೆ ಬೀಳ್ಕೊಡುವ ಸಮಾರಂಭವನ್ನು ಸಂಘದ ನೂತನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಯನ್ , ಉಪಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಎ, ನೂತನ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಭುವನೇಶ್ವರ ಬಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಕಾರಿ ಸಂಘಗಳ ಮೇಲ್ವಿಚಾರಕರಾದ ಯೋಗೀಶ್ ಎಚ್ ಹಾಗೂ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾದ ಎಚ್ ಜಗನ್ನಾಥ ಸಾಲ್ಯಾನ್ ಉಪಸ್ಥಿತರಿದ್ದರು.
ಸಿಬ್ಬಂದಿ ಶ್ರೀಧರ್ ಕೆ ಪ್ರಾರ್ಥನೆ ನಡೆಸಿಕೊಟ್ಟರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ನಿರ್ದೇಶಕರಾದ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು.
ಶಶಿಕಲಾ ಕೆ ಪಿ ಇವರು 1986 ರಿಂದ ಸುಮಾರು 36 ವರ್ಷಗಳ ಸುದೀರ್ಘ ಸೇವೆಯಲ್ಲಿ 10 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸಂಘದ ಸದಸ್ಯರು ಇವರು ಸಂಘವನ್ನು ಜನಸ್ನೇಹಿ ಸಂಘವಾಗಿ ಮುನ್ನಡೆಸಿ, ಗ್ರಾಹಕರಿಗೆ ನೀಡುತ್ತಿದ್ದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಕೆಯನ್ನು ನೀಡಿದರು.
ವೇದಿಕೆಯಲ್ಲಿದ್ದ ಅತಿಥಿಗಳು ಈ ಸಂಘವನ್ನು ಜನಸ್ನೇಹಿ ಸಂಘವಾಗಿ ನಡೆಸಿದ ಇವರ ಸಾಧನೆಯನ್ನು ಕೊಂಡಾಡಿದರು. ನೂತನ ಮುಖ್ಯ ಕಾರ್ಯ ನಿರ್ವಹಣಧಿಕಾರಿ ಇವರ ಸೇವೆಯನ್ನು ಅಭಿನಂದಿಸಿ, ಶುಭಹಾರೈಸಿದರು.
ಅಧ್ಯಕ್ಷರು ಲೋಪರಹಿತ ನಿಶ್ವಾರ್ಥ ಸೇವೆಯನ್ನು. ಗ್ರಾಹಕರಿಗೆ ಮನ ಸಂತೃಪ್ತಿದಾಯಕ ವಾಗಿ ನೀಡುತ್ತಿದ್ದ ಸಲಹೆ ಹಾಗೂ ಸೇವೆಯನ್ನು ಶ್ಲಾಘಿಸಿದರು. ಮುಂದಿನ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರು ಶಶಿಕಲಾ ಕೆ ಪಿ ಹಾಗೂ ಅವರ ಪತಿ ಪ್ರಭಾಕರ ಶೆಟ್ಟಿ ರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಉಪಾಧ್ಯಕ್ಷರಾದ ಮಹಾಬಲೇಶ್ವರ ಭಟ್ ವಂದಿಸಿ., ಮೋಹನ್ ದಾಸ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.


























