ಕಡಬ: ರಸ್ತೆಯಲ್ಲಿ ಮೊಸಳೆಯೊಂದು ಪತ್ತೆಯಾದ ಘಟನೆ ಆಲಂಕಾರು ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ನಡೆದಿದೆ.
ಶಾಲೆಯ ಹತ್ತಿರದಲ್ಲಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಸ್ಥಳೀಯರಾದ ಶೀನಪ್ಪ ಕುಂಬಾರ ಹಾಗೂ ಕಿರಣ್ ಕೊಂಡಾಡಿಯವರು ವೀಕ್ಷಣೆ ಮಾಡಿದ್ದು, ತಕ್ಷಣ ಅರಣ್ಯ
ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಾಲಚಂದ್ರ ಗೌಡ ಹಾಗೂ ರವಿಕುಮಾರ್ ರವರು ತಕ್ಷಣ ಸ್ಥಳಕ್ಕೆ ಅಗಮಿಸಿ, ಸ್ಥಳೀಯರೊಂದಿಗೆ, ಶೌರ್ಯ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಕುಮಾರಧಾರ ನದಿಗೆ ಬಿಡಲಾಯಿತು ಎಂದು ತಿಳಿದು ಬಂದಿದೆ.



























